ಸಂಗಮ ಆಡಿಯೋ – ಯೇ ದಿಲ್ ಮಾಂಗೇ ಮೋರ್…!

Published on September 29, 2008 by admin   ·   No Comments

d

ತಾರಾಗಣ: ಗಣೇಶ್, ವೇದಿಕಾ, ಕೋಮಲ್, ಸಾಧು ಕೋಕಿಲಾ, ರಂಗಾಯಣ ರಘು

ಸಂಗೀತ: ದೇವಿಶ್ರೀ ಪ್ರಸಾದ್

ಸಾಹಿತ್ಯ: ಕವಿರಾಜ್

ನಿರ್ದೇಶನ: ರವಿವರ್ಮ

ಆಡಿಯೋ ಸಂಸ್ಥೆ: ಝಂಕಾರ್ ಆಡಿಯೋ

3

ದಿಲ್ ಮಾಂಗೇ ಮೋರ್

ದೇವಿಶ್ರೀ ಪ್ರಸಾದ್

 

ಆಲ್ಬಂನ ಮೊದಲ ರಾಕಿಂಗ್ ಸಾಂಗ್! ಬೀಟ್ಸ್ ಸೂಪರ್. ಹುಚ್ಚು ಹಿಡಿದು ಕುಣಿಯುವಂತೆ ಮಾಡದಿದ್ದರೆ ಹೇಳಿ! ಕನ್ನಡದ TOP 10 ನಲ್ಲಿ ಟಾಪ್ 1 ಆದರೂ ಆಶ್ಚರ್ಯವಿಲ್ಲ 9/10
ಕಾದು ಕಾದು ನಾ ಕುಳಿತಿರುವೆ… ಆಗಲಿ ಸಂಗಮ ಸಾಗರ್, ದಿವ್ಯಾ Title track. ವಿಭಿನ್ನವಾದ ಗಾಯನಶೈಲಿ ಇಷ್ಟವಾಗುತ್ತದೆ. 9/10
ಹೇ ಮಿಸ್ಟರ್ ಬಾಲು ಚಿನ್ಮಯಿ, ರೀಟಾ ಹಿನ್ನೆಲೆ ಬೀಟ್ಸ್ ತುಂಬಾ ಚೆನ್ನಾಗಿದೆ. ಸಾಹಿತ್ಯ ಸಾಧಾರಣ. 7/10
ಮಧು ಮಾಸ ಕಾರ್ತಿಕ್ ಕಾರ್ತಿಕ್  ಕಂಠ ಉತ್ತಮ ಆದರೆ ಹಾಡಿನಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಹ ವಿಶೇಷತೆಯೇನೂ ಇಲ್ಲ.  6/10
ಕೊಡು ಕೊಡು ವರವನು ಭಗವಂತ ಗೋಪಿಕಾ, ಪೂರ್ಣಿಮಾ ಭಕ್ತಿಗೀತೆ – ಪಾಶ್ಚಿಮಾತ್ಯ ಸಂಗೀತಗಳ ಮಿಶ್ರಣ.ಭಿನ್ನ ಪ್ರಯತ್ನವೇನೋ ಹೌದು.ಆದರೆ  ಇನ್ನಷ್ಟು ಉತ್ತಮ ವಾಗಬಹುದಿತ್ತು.  7/10
 ಮುದ್ದು ಮುದ್ದು  ರಂಜಿತ್,ಶ್ರೀವಿದ್ಯಾ  Another fast number.  ತೀರಾ ಸಾಧಾರಣ.  6/10

ಒಟ್ಟಿನಲ್ಲಿ ಬಹು ನಿರೀಕ್ಷಿತ ಸಂಗಮ ಚಿತ್ರದ ಎರಡು ಹಾಡುಗಳು ಉತ್ಕೃಷ್ಠ ಮಟ್ಟದಲ್ಲಿದ್ದು ಮೊದಲ ಬಾರಿ ಕೇಳಿದಾಗಲೇ ಗಮನ ಸೆಳೆಯುತ್ತವೆ. ಹಾಡುಗಳಲ್ಲಿ ಬೀಟ್ಸ್‍ಗಳ ಬಳಕೆ ಅತ್ಯದ್ಭುತವಾಗಿ ಬಂದಿದೆ. ಮಾಧುರ್ಯ ಭರಿತ ಹಾಡಿನ ಕೊರತೆಯಿದೆ. ಎಲ್ಲ ಹಾಡುಗಳಲ್ಲೂ ಬೀಟ್ಸ್, ಲಯ ಪ್ರಧಾನ ಸಂಗೀತದ್ದೇ ಕಾರುಬಾರು!  ಆದರೆ ಸಾಹಿತ್ಯದಲ್ಲಿ ಅಂತಹ ಹೊಸತನವಿಲ್ಲ. ಎಲ್ಲಾ ಹಾಡುಗಳಿಗೂ ಕವಿರಾಜ್ ಒಬ್ಬರೇ ಸಾಹಿತ್ಯ ಒದಗಿಸಿರುವುದು ಒಟ್ಟಾರೆ ಹಾಡುಗಳ ಮೇಲೆ ಪರಿಣಾಮ ಬೀರಿದೆ. ಹಾಡೊಂದು ಜನಪ್ರಿಯವಾಗಲು ಬೀಟ್ಸ್, ಗಾಯನ, ಹಿನ್ನೆಲೆ ಸಂಗೀತದ ಜೊತೆ ಸಾಹಿತ್ಯ ಕೂಡ ಅಷ್ಟೇ ಮುಖ್ಯ ಎಂಬುದನ್ನು ಕೊಂಚ ಮರೆತಂತಿದೆ.

 

akumar.reach@gmail.com  

Readers Comments (0)




Please note: Comment moderation is enabled and may delay your comment. There is no need to resubmit your comment.

Author Info