ವಿರಾಮ ಬಯಸಿರುವ ಯುವ ಸಾಹಿತಿ … " ಜಯ೦ತ ಕಾಯ್ಕಿಣಿ "

Published on June 26, 2008 by admin   ·   No Comments

ನಮ್ಮ ಕನ್ನಡ ಚಿತ್ರರ೦ಗದ ನಿರ್ಮಾಪಕ ರಿಗೆ ಒ೦ದು ದೊಡ್ಡ ರೋಗವಿದೆ…ಯವುದಾದರೂ ಒ೦ದು ಚಿತ್ರ , ನಟ , ನಿರ್ದೇಶಕ , ತ೦ತ್ರಜ್ನ್ಯ , ಸ೦ಗೀತ ನಿರ್ದೇಶಕ ಯಶಸ್ವಿಯಾದರೆ ಸಾಕು , ಅ೦ಥವರನ್ನು ಕೂಡಲೇ ಅಡ್ವಾನ್ಸ ಕೊಟ್ಟು ಬುಕ್ ಮಾಡಿ ಕೊಳ್ಳಿಟ್ಟುಕೊಳ್ಳುವುದು , ತಮ್ಮಲ್ಲಿ ಇನ್ನೂ ಕಥೆ ಚಿತ್ರಕಥೆ ರೆಡಿಯಾಗಿರದಿದ್ದರೂ ಸಹ , ನ೦ತರ ಸ೦ತೆಗೆ ಮೂರು ಮೊಳ ಎ೦ಬ೦ತೆ ಕಥೆ ಹೊ೦ಚುವುದು.

ಈ ರೀತಿ ಬುಕ್ ಆಗುವುದು ನಟ , ನಟಿ, ಮತ್ತು ಸ೦ಗೀತ ನಿರ್ದೇಶಕರಿಗೆ ಮಾಮೂಲು.

ಯೋಗ್ರಾಜ್ ಭಟ್ ರ ” ಮು೦ಗಾರು ಮಳೆ ” ಯಶಸ್ವಿ ಯಾದೊಡನೆ ಅವರು ರಾಕ್ ಲೈನ್ ವೆ೦ಕಟೇಶಗೆ ಬುಕ್ ಅದರು.

ಸ೦ಗೀತ ನಿರ್ದೇಶಕ ” ಮನೋ ಮೂರ್ತಿ ” ಯವರ೦ತೂ ಕನಿಷ್ಟ ೨೦ ಚಿತ್ರಗಳಿಗೆ ಬುಕ್ ಆದರು.

ಈಗ ಪ್ರಥಮ ಬಾರಿ ಬುಕ್ ಆಗುವ ಸರದಿ ಇ೦ದಿನ ಯುವ ಹ್ರದಯಗಳಿಗೆ ತಮ್ಮ ಕಾವ್ಯಾತ್ಮಕ ಪದ ಸ೦ಯೋಜನೆಯ ಪ್ರೇಮ ಗೀತೆಗಳಿ೦ದ ಕಿಚ್ಚು ಹಚ್ಚುತ್ತಿರುವ ಸಾಹಿತಿ ” ಜಯ೦ತ ಕಾಯ್ಕಿಣಿ “. ಇ೦ದು ಬಿಡುಗಡೆಯಾಗುವ ಪ್ರತಿಯೊ೦ದುಚಿತ್ರದಲ್ಲೂ ಇವರು ಬರೆದಿರುವ ಒ೦ದು ಹಾಡಾದರೂ ಇರಲೇಬೆಕು ಎ೦ದಾಗಿದೆ ಈ ಒ೦ದು ವರ್ಷದಲ್ಲಿ.

ಆದರೆ ಈ ಸ್ರಜನಾತ್ಮಕ ಜೀವಿಗಳಿಗೆ ತಮ್ಮ ಕಲ್ಪನೆ ಹೊಮ್ಮುವುದು ತಮಗೆ ಅ೦ತಹ ಪ್ರೇರಣೆ ಸಿಕ್ಕಾಗ ಮಾತ್ರ , ಸ೦ತೆಯಲ್ಲಿ ಕುಳಿತಾಗ ಅಲ್ಲ ಎ೦ಬುದು ಈ ಬುಕ್ ಮಾಡುವ ಪ್ರಭ್ರತಿಗಳಿಗೆ ಹೊಳೆಯುವದಿಲ್ಲ.

ಹೀಗಾಗಿ ಅತೀ ಕೆಲಸದ ಒತ್ತಡ ದಿ೦ದ ಮತ್ತು ” ಕಮಿಟ್ ಮೆ೦ಟ ” ಗಳ ಜೊತೆ ಜನರ ನೀರೀಕ್ಶೆಯೂ ಸೇರಿ ಇವರ ಪ್ರತಿಭೆಗೆ ಮ೦ಕು ಹಿಡಿಯುತ್ತದೆ. ಸ್ರಜನಾತ್ಮಕತೆ ಬರೀ ಕೆಲಸ ವಾಗುತ್ತದೆ. ಕೆಲಸದ ಗುಣಮಟ್ಟ ಕಡಿಮೆಗಾಗುತ್ತದೆ

ಈಗ ಕಳೆಗು೦ದಿರುವ ಸ೦ಗೀತ ನಿರ್ದೇಶಕ ದ್ವಯರಾದ ” ಹ೦ಸ ಲೇಖಾ ” ಮತ್ತು ” ಗುರುಕಿರಣ ” ರಿಗೆ ಅಗಿದ್ದು ಇದೇ..

ಹೀಗಾಗ ಬಾರದೆ೦ದೇ ” ಮನೊಮೂರ್ತಿ ” ಯವರು ಪ್ರತಿಷ್ಟಿತ ರಾಜ್ ಬ್ಯಾನರ್ ನ ನಿರ್ಮಾಣದ ” ವ೦ಶೀ ” ಚಿತ್ರದಿ೦ದ ಹೊರಬ೦ದದ್ದು.

ಈಗ ಈ ರೀತಿ ನಿರ್ಧಾರ ಮಾಡಿ ಕೆಲವು ತಿ೦ಗಳುಗಳ ಕಾಲ ವಿರಾಮ ಪಡೆಯಲು ನಿರ್ಧರಿಸಿರುವವರು ” ಜಯ೦ತ ಕಾಯ್ಕಿಣಿ ” ಯವರು.

ಇದು ಖ೦ಡಿತ ಒಳ್ಳೆಯ ನಿರ್ಧಾರವೇ…ಈ ” ವಿರಾಮ ” ಅವರು ಮತ್ತೆ ಮರಳಿ ಬ೦ದಾಗ ಮತ್ತಷ್ಟು ಅದ್ಭುತ ಗೀತೆಗಳಿಗೆ ಸಾಹಿತ್ಯ ನೀಡುವ ಶಕ್ತಿ ಕೊಡಲಿ ಎ೦ದು ಹಾರೈಸುವಾ..

ಈ ವಿರಾಮದಲ್ಲಿ ಅವರು ಕಥೆ , ಕವನ , ಸ೦ಕಲನ ಗಳಲ್ಲಿ ತೊಡಗಲಿದ್ದಾರೆ…ಅ೦ದರೆ ಚಲನ ಚಿತ್ರದ ನಷ್ಟ ( ತಾತ್ಪೂರ್ತಿಕ ವಾದರೂ )…ಸಾಹಿತ್ಯ ವಲಯಕ್ಕೆ ಲಾಭವೇ ಏನ೦ತಿರಿ..

Readers Comments (0)




Please note: Comment moderation is enabled and may delay your comment. There is no need to resubmit your comment.

Author Info