ಡಿಸೆಂಬರ್ 12 ರಿಂದ – ಡಿಸೆಂಬರ್ 18 ರವರೆಗೆ
ಸುದ್ದಿ ಸುದ್ದಿ ಸುದ್ದಿ… ಅನಿರೀಕ್ಷಿತ ಬೆಳವಣಿಗೆಗಳ ಸುದ್ದಿ… ಗಾಂಧೀನಗರದ ವಾಸ್ತವತೆಯ ಕಹಿ ಸುದ್ದಿ..
ಪುನೀತ್ ರಾಜ್ ಕುಮಾರ್ ಅಭಿನಯದ ವಂಶಿ ಚಿತ್ರ ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿ! ಹತ್ತು ವಾರಗಳ ಹಿಂದೆ ತಾಜ್ ಮಹಲ್ ಚಿತ್ರಕ್ಕಾದ ದುಃಸ್ಥಿತಿ ಈಗ ವಂಶಿ ಚಿತ್ರಕ್ಕೆ ಬಂದೊದಗಿದೆ. ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ. ವಂಶಿ ಚಿತ್ರ ಶತದಿನೋತ್ಸವಕ್ಕೆ ಮೊದಲೇ ಸಂತೋಷ್ ಚಿತ್ರಮಂದಿರವನ್ನು ತೊರೆದು ಪಕ್ಕದ ಸಪ್ನಾಕ್ಕೆ ಸ್ಥಳಾಂತರವಾಗುತ್ತಿದೆ.
ಈ ವಾರದ ಸ್ಲಂ ಬಾಲ ಚಿತ್ರ ಕೂಡ ಎತ್ತಂಗಡಿಯಾಗುವುದರಲ್ಲಿತ್ತು. ಗುರುವಾರ ಸಂಜೆಯವರೆಗೂ ಸಾಗರ್ ಚಿತ್ರಮಂದಿರದಲ್ಲಿ ಇಂಗ್ಲಿಷ್ ಚಿತ್ರವೊಂದು ಬಿಡುಗಡೆಯಾಗುವುದಾಗಿ ಸುದ್ದಿಯಲ್ಲಿತ್ತು. ಆದರೆ ಕೊನೆಯ ಕ್ಷಣದ ಧಿಡೀರ್ ಬೆಳವಣಿಗೆಗಳಿಂದಾಗಿ ಸ್ಲಂ ಬಾಲ ಬಚಾವಾಗಿದ್ದಾನೆ. ಸಾಗರ್‍ನಲ್ಲಿ ಮುಂದುವರೆಯುತ್ತಿದ್ದಾನೆ.
ಗಂಗಾ ಕಾವೇರಿ ತನ್ನ 2 ವಾರಗಳ ಪಯಣವನ್ನು ಮುಗಿಸಿ ಗಾಂಧೀ ನಗರದಿಂದಾಚೆಗೆ ಹರಿದು ಹೋಗಲಿದೆ..
ಚಿತ್ರಮಂದಿರಗಳ ಅಭಾವ, ಅಭಿನಯ್ ಮುಂತಾದ ಚಿತ್ರಮಂದಿರಗಳ ಕನ್ನಡ ವಿರೋಧಿ ಮನೋಭಾವನೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳತ್ತ ಪ್ರೇಕ್ಷಕ ಮಹಾಶಯ ತೋರುತ್ತಿರುವ ನಿರಾಸಕ್ತಿ ಎಲ್ಲಾ ಓಟ್ಟಿಗೆ ಸೇರಿ ಎರಡು ಒಳ್ಳೆಯ ಚಿತ್ರಗಳನ್ನು ಯಶಸ್ವಿಯಾಗಿ ಎತ್ತಂಗಡಿ ಮಾಡಿಸುತ್ತಿವೆ. ಇದೇ ನಿಜವಾದ ಗಾಂಧೀನಗರ!
ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿರುವ ದಿಗಂತ್, ನಾಗಕಿರಣ್, ವಿಜಯ ರಾಘವೇಂದ್ರ ಅಭಿನಯದ ಮಸ್ತ್ ಮಜಾ ಮಾಡಿ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ನಾಯಕಿ ಜನಿಫರ್ ಕೋತ್ವಾಲ್.
ನಾಗಕಿರಣ್ ಅಭಿನಯದ ಮತ್ತೊಂದು ಚಿತ್ರ ಪಲ್ಲವಿ ಇಲ್ಲದ ಚರಣ ಕೂಡ ಅಪರ್ಣಾದಲ್ಲಿ ಈ ವಾರವೇ ತೆರೆಗೆ ಬರುತ್ತಿದೆ.
ವಾರದ ಮೂರನೇ ಚಿತ್ರ ಸಂಚು! ಚಿತ್ರಮಂದಿರಗಳೇ ಸಿಗದ ಈ ವಿಷಮ ಕಾಲದಲ್ಲಿ ತೆರೆಕಾಣಬೇಕಾದರೆ ಈ ಚಿತ್ರ ಏನೇನು ಸಂಚು ಮಾಡಬೇಕಾಗಿ ಬಂತೋ ಗೊತ್ತಿಲ್ಲ.
ಗಂಧದಗುಡಿಯ ಕಡೆಯಿಂದ ಈ ಮೂರೂ ಚಿತ್ರಗಳಿಗೂ ಶುಭ ಹಾರೈಸೋಣ.
::ಹೊರನಡೆಯುತ್ತಿರುವ ಚಿತ್ರಗಳು::
![]()
![]() |
2 ನೇ ವಾರಕ್ಕೆ – ತ್ರಿಭುವನ್ |
![]() |
2 ನೇ ವಾರಕ್ಕೆ – ಮೇನಕಾ |
|
2 ನೇ ವಾರಕ್ಕೆ – ತ್ರಿವೇಣಿ |
|
6 ನೇ ವಾರಕ್ಕೆ – ಸಾಗರ್ |
![]() |
6 ನೇ ವಾರಕ್ಕೆ - ಕಪಾಲಿ |
|
12 ನೇ ವಾರಕ್ಕೆ – ನರ್ತಕಿ |
ಸಧ್ಯಕ್ಕೆ "ಬುದ್ಧಿವಂತ" ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (12 ನೇ ವಾರದಲ್ಲಿ!)
- ಕಾರಂಜಿ
![]()