ಮುಸ್ಸಂಜೆ ಮಾತಿಗೆ 100ರ ಸಂಭ್ರಮ! ಕೋಡಗನ ಕೋಳಿ ನುಂಗಿತ್ತ ತೆರೆಗೆ.

Published on August 19, 2008 by admin   ·   No Comments
ಆಗಸ್ಟ್ 22 ರಿಂದ 28 ರ ವರೆಗೆ
mm
ಸಂಭ್ರಮದ ಶತದಿನೋತ್ಸವ!
ಸುದೀಪ್-ರಮ್ಯಾ ಅಭಿನಯದ ವಿ.ಶ್ರೀಧರ್ ಸುಮಧುರ ಸಂಗೀತವಿರುವ ಮುಸ್ಸಂಜೆ ಮಾತು ಈ ವಾರ ತ್ರಿವೇಣಿಯಲ್ಲಿ ಶತದಿನಗಳನ್ನು ಪೂರೈಸಲಿದೆ.

ಕೋಡಗನ ಕೋಳಿ ನುಂಗಿತ್ತ ಬೆಳ್ಳಿ ತೆರೆಗೆ!  ಪ್ರಮುಖ ಚಿತ್ರಮಂದಿರ: ಮೇನಕಾ

 

 

 

ಪೂಜಾ ಗಾಂಧಿ ಮತ್ತು ನವರಸ ನಾಯಕ ಜಗ್ಗೇಶ್ ನಟನೆಯ ಹಾಸ್ಯ ಪ್ರಧಾನ ಚಿತ್ರ ಕೋಡಗನ ಕೋಳಿ ನುಂಗಿತ್ತ ಈ ವಾರ ಮೇನಕಾ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಮುಂಬೈ, ಪೂನ, ಜತ್, ಅಕ್ಕಲಕೋಟೆಗಳಲ್ಲಿ ಕೂಡ ಚಿತ್ರ ತೆರೆಕಾಣಲಿದೆ. ಕೆ.ಆರ್.ರಾಮಯ್ಯ ನಿರ್ಮಿಸಿ ವಾಸು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡಿದ್ದಾರೆ.

ವಾರದ ಮತ್ತೊಂದು ಬಿಡುಗಡೆ – ಕಲ್ಲೇಶಿ ಮಲ್ಲೇಶಿ.    ಪ್ರಮುಖ ಚಿತ್ರಮಂದಿರ: ಸಪ್ನ

mm

ಈ ಚಿತ್ರ ಎರಡು ವಾರಗಳ ಹಿಂದೆಯೇ ಬಿಡುಗಡೆಗೆ ಸಿದ್ಧವಾಗಿತ್ತಾದರೂ ಕೊನೆ ಕ್ಷಣದಲ್ಲಿ ಚಿತ್ರಮಂದಿರದ ಅಭಾವದಿಂದ ಬಿಡುಗಡೆಯಾಗಿರಲಿಲ್ಲ. ಕಪಾಲಿಯಿಂದ ಎತ್ತಂಗಡಿಯಾದ ಟಾಟಾ ಬಿರ್ಲಾ ಸಪ್ನಾಕ್ಕೆ ಬಂದದ್ದೇ ಇದಕ್ಕೆ ಕಾರಣ. ಪಾಪಾ ಪಾಂಡು ಟಿವಿ ಧಾರಾವಾಹಿಯಿಂದ ಜನಪ್ರಿಯವಾಗಿರುವ ಚಿದಾನಂದ್ ತ್ರಿಪಾತ್ರದಲ್ಲಿ ನಟಿಸಿರುವ ಕಲ್ಲೇಶಿ ಮಲ್ಲೇಶಿ ಈ ವಾರ ಅಂತೂ ಇಂತೂ ಈ ವಾರ ತೆರೆಗೆ ಸಪ್ನಾದಲ್ಲಿ ತೆರೆಕಾಣುತ್ತಿದೆ. ಮಸ್ತಾನ್ ಈ ಚಿತ್ರದ ನಿರ್ದೇಶಕರು. ಧರ್ಮ, ಬುಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ, ಲಕ್ಷ್ಮೀ ದೇವಿ ಚಿತ್ರದ ಇತರ ತಾರಾಗಣದಲ್ಲಿದ್ದಾರೆ.

ಮಾದೇಶನಿಗೆ ಸೆನ್ಸಾರ್ ಸಮಸ್ಯೆ!

ರವಿ ಶ್ರೀವತ್ಸ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಮಾದೇಶ ಚಿತ್ರಕ್ಕೆ ಕರ್ನಾಟಕ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ಕೊಡಲು ನಿರಾಕರಿಸಿದೆ. ಅತಿಯಾದ ಹಿಂಸೆ ಮತ್ತು ಭೂಗತ ಜಗತ್ತಿನ ಅತಿರೇಕದ ವೈಭವೀಕರಣದಿಂದ ಸಮಾಜದ ಮೇಲೆ ದುಷ್ಪರಿಣಾಮವಾಗಲಿದೆ ಎಂಬುದು ಸೆನ್ಸಾರ್ ಮಂಡಲಿ ಕೊಡುವ ಕಾರಣ. ಇದೀಗ ಮಾದೇಶ ದೆಹಲಿ ಸೆನ್ಸಾರ್ ಮಂಡಲಿಯ ಮೊರೆ ಹೋಗಲಿದ್ದು ಮಾದೇಶ ಚಿತ್ರ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

DD

ಮುಂದುವರಿದ ಪ್ರದರ್ಶನ: 

a 2 ನೇ ವಾರಕ್ಕೆ – ನರ್ತಕಿ

aaa 2 ನೇ ವಾರಕ್ಕೆ – ಅಪರ್ಣಾ

bombat

3 ನೇ ವಾರಕ್ಕೆಕಪಾಲಿ

 

mm

6 ನೇ ವಾರಕ್ಕೆ – ಸಾಗರ್

 

mm 5 ನೇ ವಾರಕ್ಕೆ – ಸಂತೋಷ್ 

15 ನೇ ವಾರಕ್ಕೆ (ಸಂಭಮದ ನೂರನೇ ದಿನ) – ತ್ರಿವೇಣಿ

ಮುಂದಿನ ಬದಲಾವಣೆ…

  • ಚೈತ್ರದ ಚಂದ್ರಮ
  • ಮಾದೇಶ
  • ಧಿಮಾಕು
  • PUC
Readers Comments (0)




Please note: Comment moderation is enabled and may delay your comment. There is no need to resubmit your comment.

Author Info