ಮೀಸೆ ಇಲ್ಲದ ವೀರ ಮದಕರಿಯಾಗಲಿರುವ ಸುದೀಪ್ !

Published on June 26, 2008 by admin   ·   No Comments

2008 ಸುದೀಪ್ ಪಾಲಿಗೆ ಅದೃಷ್ಟದ ವರ್ಷವೆಂದರೆ ತಪ್ಪಲ್ಲ. ಗೂಳಿ ಸಾಧಾರಣ ಯಶಸ್ಸು ಕಂಡಿತು. ಮುಸ್ಸಂಜೆ ಮಾತು ಚೆನ್ನಾಗಿ ಓಡುತ್ತಿದು 50 ದಿನಗಳ ಹೊಸ್ತಿಲಿಗೆ ಬಂದು ನಿಂತಿದೆ. ಕಳೆದ ವಾರ ಬಿಡುಗಡೆಯಾದ ಕಾಮಣ್ಣನ ಮಕ್ಕಳಿಗೂ ಒಳ್ಳೆಯ ಮಾತಿದೆ. ಹಾಗಾಗಿ ಸುದೀಪ್ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ ಈತ ಸುಮ್ಮನೆ ಕೂರುವ ಆಸಾಮಿ ಅಲ್ಲ. ಸದಾ ಒಂದಿಲ್ಲೊಂದು ಚಿತ್ರದಲ್ಲಿ ತೊಡಗಿಕೊಂಡಿರುತ್ತಾನೆ. ಸಾಧು ಕೋಕಿಲ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸಿರುವ “ತೀರ್ಥ” ಚಿಪ್ರಗತಿಯಲ್ಲಿರಬೇಕಾದರೇ ಇದೇ ಜೋಡಿ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ. ಹೆಸರು “ವೀರ ಮದಕರಿ”.ಎಸ್. ದಿನೇಶ್ ಗಾಂಧಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಸುದೀಪ್‍ಗೆ ಪೋಲಿಸ್ ಅಧಿಕಾರಿಯ ಪಾತ್ರ. ಹುಬ್ಬಳ್ಳಿ ಮತ್ತು ತಿರುಪತಿ ಚಿತ್ರಗಳಲ್ಲಿ ಈಗಾಗಲೇ ಪೋಲಿಸ್ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಇದು ಅವೆಲ್ಲಕ್ಕಿಂತ ಭಿನ್ನವಾಗಿರಲಿದೆ ಎಂಬುದು ನಿರ್ದೇಶಕ ಸಾಧು ಕೋಕಿಲಾ ಹೇಳಿಕೆ. ಅಲ್ಲದೇ ಸುದೀಪ್ ಮೀಸೆ ಇಲ್ಲದೇ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ.

ಸಾಧು ಕೋಕಿಲ ಈ ಚಿತ್ರಕ್ಕೆ ಸಂಗೀತ ನೀಡುತ್ತಿಲ್ಲ. ಎಂ. ಎಂ. ಕೀರವಾಣಿಯವರು “ವೀರ ಮದಕರಿ”ಯ ಸಂಗೀತ ನಿರ್ದೇಶಕರು. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶಕರು.

ಅಂದ ಹಾಗೆ ಕಳೆದ ವಾರ ನಡೆದ ವೀರ ಮದಕರಿ ಚಿತ್ರದ ಪತ್ರಿಕಾ ಗೋಷ್ಠಿ ನಡೆಯಿತಂತೆ. ಅಲ್ಲಿ ಚಿತ್ರದ ನಿರ್ಮಾಪಕರು ಇದು ರೀಮೇಕ್ ಚಿತ್ರ ಎಂದು ಒಪ್ಪಿಕೊಂಡರಂತೆ! ಚಿತ್ರ ಬಿಡುಗಡೆಯಾದ ಮೇಲೂ ಇದು ಸ್ವಮೇಕ್ ಅಂತ ಹೇಳಿಕೊಂಡು ತಿರುಗಾಡೊ ಎಷ್ಟೋ ನಿರ್ಮಾಪಕರ ಮುಂದೆ ದಿನೇಶ್ ಗಾಂಧಿ ಭಿನ್ನವಾಗಿ ನಿಲ್ಲುತ್ತಾರೆ ಅಲ್ಲವೇ ?

Readers Comments (0)




Please note: Comment moderation is enabled and may delay your comment. There is no need to resubmit your comment.

Author Info