
ಬುದ್ಧಿವಂತ ಮುಖ್ಯ ಚಿತ್ರಮಂದಿರ: ನರ್ತಕಿ. ಅರ್ಜುನ್ ಹೊರಕ್ಕೆ
|
ಈ ವಾರ ಗಾಂಧೀನಗರದಲ್ಲಿ ಎರಡು ಬಹು ನಿರೀಕ್ಷಿತ ಚಿತ್ರಗಳು ತೆರೆಕಾಣುತ್ತಿವೆ. ಮೊದಲನೆಯದು ಉಪೇಂದ್ರ ಐವರು ನಾಯಕಿರರೊಡನೆ ಹೊಸ ಗೆಟ್ ಅಪ್ ಹಳಲ್ಲಿ ಕಾಣಿಸಿಕೊಂಡಿರುವ "ಬುದ್ಧಿವಂತ" ಚಿತ್ರ. ತಮಿಳಿನ ನಾನ್ ಅವನ್ ಅಲ್ಲೈ ಚಿತ್ರದ ಕನ್ನಡ ಅವತರಣಿಕೆಯಾದ ಈ ಚಿತ್ರ ಈಗಾಗಲೇ ಹಲವಾರು ಕಾರಣಗಳಿಂದಾಗಿ ನಿರೀಕ್ಷೆ ಹುಟ್ಟುಹಾಕಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮತ್ತು ಎ. ಮೋಹನ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಪ್ರಚಾರಕ್ಕೆ ಹೊಸ ಹೊಸ ಮಾರ್ಗಗಳನ್ನು ಅನುಸರಿಸಲಾಗುತ್ತಿದ್ದೆ. ಬಸವನ ಗುಡಿಯನ್ಯಾಷನಲ್ ಕಾಲೇಜಿನಿಂದ ಮುಖ್ಯ ಚಿತ್ರಮಂದಿರವಾದ ನರ್ತಕಿಯವರೆಗೆ ಮೆರವಣಿಗೆ ಹೋಗುವುದು, ಮತ್ತುಮಂದಿರ ಮಸೀದಿ, ಚರ್ಚ್ ಗಳ ಮಧ್ಯೆ ಉಪೇಂದ್ರ ಕುಳಿತು ಧ್ಯಾನ ಮಾಡುವ ವಿಶೇಷ ಸೆಟ್‍ಗಳನ್ನು ಪ್ರಮುಖ ಚಿತ್ರಮಂದಿರಗಳ ಎದುರು ಹಾಕುವುದು ಇವೆಲ್ಲ ಜನರನ್ನು ಚಿತ್ರನಿರ್ಮಾಪಕರ ಹೊಸ ಆವಿಷ್ಕಾರಗಳು.
ಚಿತ್ರದಲ್ಲಿ ಏಳು ಹಾಡುಗಳಿದ್ದು ಅವುಗಳಲ್ಲಿ ಕೆಲವು ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. "ಸೊಸೆ ತಂದ ಸೌಭಾಗ್ಯ" ಚಿತ್ರದ ಪಿಬಿಎಸ್ ಹಾಡಿರುವ ರವಿವರ್ಮನ ಕುಂಚದ ಹಾಡನ್ನು ಹರಿಹರನ್ ಕಂಠದಲ್ಲಿ ರೀಮಿಕ್ಸ್ ಮಾಡಿದ್ದು ಆ ಹಾಡು ಭಾರೀ ಯಶಸ್ವಿಯಾಗಿದೆ.
|
|
|
|
ಪಟ್ರೆ ಲವ್ಸ್ ಪದ್ಮ – ಮುಖ್ಯ ಚಿತ್ರ ಮಂದಿರ – ಮೇನಕಾ. ಕೋಡಗನ ಕೋಳಿ ನುಂಗಿತ್ತಾ ಹೊರಕ್ಕೆ.
|
|
| ಈ ವಾರದ ಮತ್ತೊಂದು ಪ್ರಮುಖ ಆಕರ್ಷಣೆ ನವನಟ ಅಜಿತ್ ಅಭಿನಯದ "ಪಟ್ರೆ ಲವ್ಸ್ ಪದ್ಮ". ಚಿತ್ರ ತನ್ನ ವಿಶಿಷ್ಟ ಪೋಸ್ಟರ್ ಮತ್ತು ಟ್ರೈಲರ್ ಗಳಿಂದ ಭಾರೀ ಕುತೂಹಲವನ್ನು ಹುಟ್ಟು ಹಾಕಿದೆ. ನಾಯಕನೊಬ್ಬ ತನ್ನ ಲವ್ "ಪದ್ಮ"ಳಿಗಾಗಿ ಮೂರು ಮಂದಿ ಪದ್ಮಾ ಎಂಬ ಹೆಸರಿನ ಹುಡುಗಿಯರ ಹಿಂದೆ ಬೀಳುತ್ತಾನೆ. ಆಮೇಲೆ ಆತನಿಗೆ ನಿಜವಾದ ಪದ್ಮಾ ಸಿಗುತ್ತಾಳೆಯೋ ಇಲ್ಲವೋ ಎಂಬುದು ಚಿತ್ರದ ಪ್ರಮುಖ ಸಾರ. ನಿರ್ದೇಶಕ ಚಂದ್ರಶೇಖರ್ ಹೇಳುವಂತೆ ಇದೊಂದು ವಿಶಿಷ್ಟ ಪ್ರೇಮ ಕಥಾನಕ. ಕನ್ನಡದಲ್ಲಿ ಇದುವರೆಗೆ ಈ ರೀತಿಅಯ ನಿರೂಪಣೆ ಬಂದಿಲ್ಲವಂತೆ.ಚಿತ್ರಕ್ಕೆ ಅರ್ಜುನ್ ಸಂಗೀತ ನೀಡಿದ್ದು "ಹಿಂಗ್ಯಾಕೆ ಹಿಂಗ್ಯಾಕೆ" "ಕೈ ಮುಗಿವೆ" ಹಾಡುಗಳು ಜನಪ್ರಿಯವಾಗಿವೆ.
ತಾರಾಗಣ: ಅಜಿತ್, ಕೃತಿಕಾ, ದೀಪಿಕಾ, ವಿಜಯಲಕ್ಷ್ಮಿ,ಪವಿತ್ರಾ,ಸುಪ್ರಿಯ ಸಂಗೀತ:ಅರ್ಜುನ್ ನಿರ್ಮಾಪಕರು: ಆರ್.ಪ್ರಮಿಳಾ ನಿರ್ದೇಶನ: ಚಂದ್ರಶೇಖರ್ ಶ್ರೀವಾಸ್ತವ್ |
|
|
![]()
![]() |
3 ನೇ ವಾರಕ್ಕೆ – ತ್ರಿಭುವನ್ |
|
|
4 ನೇ ವಾರಕ್ಕೆ – ಅಪರ್ಣ |
![]() |
4 ನೇ ವಾರಕ್ಕೆ – ಕಪಾಲಿ |
|
|
5 ನೇ ವಾರಕ್ಕೆ – ತ್ರಿವೇಣಿ |
|
|
10 ನೇ ವಾರಕ್ಕೆ – ಸಂತೋಷ್ |
|
|
11 ನೇ ವಾರಕ್ಕೆ – ಸಾಗರ್ |
ಸಧ್ಯಕ್ಕೆ ಮೊಗ್ಗಿನ ಮನಸು ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (11 ನೇ ವಾರದಲ್ಲಿ)
![]()