ಬರಗೂರರ ಮುಂದಿನ ಚಿತ್ರ "ಉಗ್ರಗಾಮಿ"!

Published on July 14, 2008 by admin   ·   No Comments

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸುಮ್ಮನೇ ಕೂರುವ ವ್ಯಕ್ತಿ ಅಲ್ಲವೇ ಅಲ್ಲ! ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಳೇ ಬಂದಿದ್ದಾರೆ! ಸಾರಸ್ವತ ಕ್ಷೇತ್ರ ಮಾತ್ರವಲ್ಲದೇ ಚಿತ್ರರಂಗದಲ್ಲೂ ಈಗಾಗಲೇ ಹಲವಾರು ಪ್ರಯತ್ನಗಳನ್ನು ಮಾಡಿ ಹೆಸರು ಮಾಡಿದ್ದಾರೆ. ಶಾಂತಿ ಎಂಬ ಏಕ ಪಾತ್ರದ ಚಿತ್ರ ಮಾಡಿ ಗಮನ ಸೆಳೆದಿದ್ದು ಹಸಿರಾಗಿರುವಾಗಲೇ ಈಗ ಮತ್ತೊಂದು ವಿಭಿನ್ನ ಚಿತ್ರ ಮಾಡಲು ಹೊರಟಿದ್ದಾರೆ. ಈ ಚಿತ್ರದ ಹೆಸರು ಉಗ್ರಗಾಮಿ!

baraguru

ಇದು ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಂತೆ! ಗೃಹ ಮಂತ್ರಿಯನ್ನು ಕೊಲ್ಲುವ ಸಂಚು ರೂಪಿಸಿ ಉಗ್ರಗಾಮಿಯೊಬ್ಬನು ನವವಿವಹಿತೆಯೋರ್ವಳ ಮನೆಯಲ್ಲಿ ಆಶ್ರಯ ಪಡೆಯಬೇಕಾಗುತ್ತದೆ. ಆಗ ಆತನ ಮನಸ್ಸಿನಲ್ಲಗುವ ತಲ್ಲಣಗಳನ್ನು ಚಿತ್ರ ಬಿಂಬಿಸಲಿದೆಯಂತೆ. ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ನೀನಾಸಂ ಅಶ್ವತ್ಥ್, ಭಾವನಾ
,
ಎಚ್.ಎಂ.ಟಿ.
ನಂದ, ರಾಧಾ ರಾಮಚಂದ್ರ, ವತ್ಸಲಾ ಮೋಹನ್, ಕಿಶೋರ್,  ಮುಂತಾದವರುಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ, ಇದೂ ಒಂದು "ಪ್ರಶಸ್ತಿ" ಪಡೆಯಲಿರುವ ಚಿತ್ರವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಜೊತೆಗೆ ಇದು ಕಮರ್ಷಿಯಲ್ ಆಗಿ ಕೂಡ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ!

Readers Comments (0)




Please note: Comment moderation is enabled and may delay your comment. There is no need to resubmit your comment.

Author Info