ಇದರ ಮಧ್ಯೆ ಪರಮೇಶ ನಾಯಕಿಯನ್ನು ಬೇಟಿ ಆಗ್ತಾನೆ ,ಬೇಟಿಗೆ ಕಾರಣವು ಅವನ ತಂಗಿ ,ತಂಗಿಯ ಪರೀಕ್ಷೆಗೆ ಓದೋಕೆ ತೊಂದರೆ ಆಗೋತರ ನಾಯಕಿಯು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುತ್ತಾಳೆ. ಅಲ್ಲಿ ನಾಯಕಿಗೆ ಈಗೆಲ್ಲ ಅಕ್ಕ-ಪಕ್ಕದವರಿಗೆ ತೊಂದರೆ ಕೊಡೊ ತರ ,ಧ್ವನಿವರ್ದಕಗಳನ್ನ ಬಳಸ ಬಾರದು ಅಂತ ಬುದ್ದಿವಾದ ಹೇಳ್ತಾನೆ . ಯಾವ ಚಿತ್ರದಲ್ಲಿ ನಾಯಕಿ ಮೊದಲ ಸಲವೆ ಬುದ್ದಿ ಕೇಳ್ತಾಳೆ ,ಇಲ್ಲೂ ಅದೆ ಮುಂದುವರಿಯುತ್ತದೆ. ಅಷ್ಟರಲ್ಲಿ S.I.ಶ್ರೀನಿವಾಸ್ ಮೂರ್ತಿ ಯವರ ಆಗಮನ ,ಬಂದು ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗುತ್ತರೆ for a change.
ಆದರೆ ನಾಯಕಿಗೆ ತನ್ನ ಹುಟ್ಟುಹಬ್ಬವನ್ನು ತನ್ನ ಇಛ್ಛೆಯಂತೆ ನೆಡೆಯಲಿಲ್ಲವೆಂಬ ಕೋಪಕ್ಕೆ ಮಾರನೆಯ ದಿನ ಪರಮೇಶನ ಪಾನ್ ಅಂಗಡಿಗೆ ಬರುತ್ತಾಳೆ. ಪಾನ್ ಅಂಗಡಿ ನಾ ನೋಡಿರೊ ಪ್ರಕಾರ ಸಣ್ಣದಾಗಿರುತ್ತೆ ,ಆದ್ರೆ ಇಲ್ಲಿ ಅದು ದೊಡ್ಡದಾಗಿ ,ಅದರ ಜೊತೆಗೆ ಒಂದು ವಿಶ್ರಾಂತಿ ಪಡೆಯಲು ಕೊಠಡಿ ,ಇದರ ಜೊತೆಗೆ ಟಿ.ವಿ. ಒಟ್ಟಿನಲ್ಲಿ ,ಒಂದು ಐಶರಾಮಿ ಪಾನ್ ಅಂಗಡಿ ಅಂತ ದರಾಳವಾಗಿ ಕರೆಯಬಹುದು. ಇಲ್ಲಿ ತನ್ಕ ಬಂದು ನಾಯಕಿ ಸುಮ್ನೆ ಇರುತ್ತಾಳ, ಇಲ್ಲ ,ಕಿತಾಪತಿ ಮಾಡ್ತಾಳೆ ,ಅದು ಅವಳಿಗೇ ತಿರುಮಂತ್ರ ಆಗುತ್ತೆ ,ಆಮೇಲೆ ನೆಡೆಯುವುದೆಲ್ಲ ತುಂಬ ನಗುತರೆಸುತ್ತದೆ ( ಕೆಲವರು Single meaningಅಲ್ಲಿ ಅರ್ಥ ಮಾಡ್ಕೊತ್ತಾರೆ ಕೆಲವರು double meaning ಅಲ್ಲಿ).
ಮುಂದೆ ಅವಳಿಗೂ ಅವಳ ಗೆಳೆತಿಯರಿಗೂ ಆಂಗ್ಲ ಮತ್ತು ಕನ್ನಡದಲ್ಲಿ,ನಮ್ಮ ಸಂಸ್ಕ್ರುತಿ, ಅದು ಇದು, ಹಿಂಗೆ ಸ್ವಲ್ಪ ಬುದ್ದಿವಾದ ಹೇಳ್ತಾನೆ ,ಇಷ್ಟೆಲ್ಲ ಕೇಳಿದ್-ಮೇಲೆ ನಾಯಕಿಗೆ ಅವಳ ತಪ್ಪು ಅರಿವಾಗುತ್ತೆ, ಆಮೇಲೆ ಪರಮೇಶನಿಗೆ ಮನಸು ಸೋತು ,ಒಂದು duet ಹಾಡ್ತಾಳೆ ಕನಸಿನಲ್ಲಿ,ಅದೆ ನಾನ್- ಎದುರು ನೋಡುತಿದ್ದ ದಿಲ್ ದಡಕ್-ದಡಕ್.
ಇದರ ನಡುವೆ ಅಣ್ಣ- ತಂಗಿ ಯರು ದೇವಸ್ಥಾನಕ್ಕೆ ಹೋಗ್ತಾರೆ ಅಲ್ಲಿ ,ಮೊದಲೆ ಹೇಳಿದ್ನಲ್ಲ ಆ Mobile ಅವನ ಜೊತೆ ಗುದ್ದಾಟ ,ಅವನಿಗೆ ಇಬ್ಬರು ಅಕ್ಕಂದಿರು ಒಬ್ಬರು ಅಹಂ ಪ್ರೇಮಾಸ್ಮಿ ಚಿತ್ರದಲ್ಲಿ ನಾಯಕಿಯ ತಾಯಿ ಪಾತ್ರ ನಿರ್ವಹಿಸಿದ್ದಾರಲ್ಲ ಅವರು ,ಮತ್ತೊಬ್ಬರು ಅಭಿ ಚಿತ್ರದಲ್ಲಿ ಅಭಿಯ ಹೆತ್ತ ತಾಯಿ.ಇವರೆಲ್ಲ ಆಶಿಷ್ ವಿಧ್ಯಾರ್ಥಿಯ ಮಕ್ಕಳು.
ಇದರ ನಡುವೆ ಒಂದು ದಿನ ಶ್ರೀನಿವಾಸ್ ಮೂರ್ತಿಯು ತನ್ನ ಮಗನ ಮತ್ತು ಪರಮೇಶನ ತಂಗಿಯ ಮದುವೆ ಪ್ರಸ್ತಾಪ ಮುಂದಿಡುತ್ತಾನೆ. ಆದು ಈ ಸಂಜೆಯೊಳಗೆ ಆಗಬೇಕೆಂದು ವಿನಂತಿಸಿಕೊಲ್ಲುತ್ತಾನೆ. ಇಲ್ಲೆ ಚಿತ್ರದ ನಿಜವಾದ ತಿರುವು. ಈ ತಿರುವು ಎನಂತ ನೀವು ತೆರೆಯ ಮೇಲೆನೆ ನೋಡಿ ಖುಷಿ( ನಿಮಗೆ ಮಜ ಸಿಕ್ಕರೆ ಮಾತ್ರ) ಪಡಬೇಕು.
ಇಲ್ಲಿಗೆ ಮಧ್ಯಂತರ
ಇದರ ನಡುವೆ ಆಶಿಷ್ ವಿಧ್ಯಾರ್ಥಿಯು ಪರಮೇಶನ ಬಾವನನ್ನು ಕೊಲ್ಲುತ್ತಿನಿ ಅಂತ ಕಿರುಚಾಡುತ್ತಾನೆ. ಆದ್ರೆ ನಮ್ಮ ನಾಯಕ ಎನು ಕಮ್ಮಿ ಇಲ್ಲ ಅವನ ಇಬ್ಬರು ಹೆಣ್ಣು ಮಕ್ಕಳನ್ನು ,ಅವರ ಗಂಡಂದಿರು ಮತ್ತು ಮಕ್ಕಳನ್ನು kidnap ಮಾಡುತ್ತಾನೆ. ಇಲ್ಲಿಂದ ಇವರಿಬ್ಬರ ನಡುವೆ ಇಲಿ ಮತ್ತು ಬೆಕ್ಕಿನ ಆಟ ಶುರುವಾಗುತ್ತದೆ ,ಅದೇನು ಎಲ್ಲರಿಗು ರುಚಿಸುವುದಿಲ್ಲ ,ದ್ವಿತಿಯಾರ್ಧದಲ್ಲಿ ನಮ್ಮನ್ನು ರಂಜಿಸುವುದು ಸಾಧು ಮತ್ತು ಓಂ.ಪ್ರಕಾಶ್ ರಾವ್ ನಡುವೆ ನೆಡೆಯವ ಹಾಸ್ಯ ದೃಶ್ಯಗಳು ,ಅದು ಎಲ್ಲೂ ಸಭ್ಯತೆ ಮೀರದೆ ಇರುವುದು ಪ್ಲಸ್ ಪಾಯಿಂಟ್. ಇದ್ದೆಲ್ಲ ಆಗೊ ಹೆತ್ತಿಗೆ ಸಿನಿಮಾ ಮುಗಿಯುವ ಹಂತಕ್ಕೆ ತಲುಪುತ್ತದೆ ,ಕೊನೆಯಲ್ಲಿ ಆಶಿಷ್ ವಿಧ್ಯಾರ್ತಿ ಪರಮೇಶನ ಬಾವನನ್ನು ಕೊಲ್ಲುತಾನ? ಇಲ್ಲವ ಅನ್ನುವುದೇ climax.
Mahesh Babu has really done a very bad job through out the movie apart from the comedy scenes involving Om prakash and Sadhu.
Shivraj Kumara has danced well and acted well in few scenes, but @ some time I feel that he should have avoided this film
Heroine Sonam is just for 2 duets and one family song and for some jokes off course.
Sonu looks good on screen .
But its the Sadhu and Omprakash film @least in 2nd half.
Music Harikrishna has given one good song and 2 average song.
Its better not to talk about the story writer.
Photography looks dull ,apart from the 2 songs pictured outside India.
At last ,ಮಹೇಶ್ ಬಾಬು ಮತ್ತು ಮಹರ್ಶಿ ಅವರ ಜೋಡಿಯ ಇನ್ನೊಂದು ಚಿತ್ರದ ಚಿತ್ರಿಕರಣ ಪ್ರಾರಂಭವಾಗಿದೆ ,ಆ(ಅಭಯ್) ಚಿತ್ರದ ನಿರ್ಮಾಪಕರು ಈ ಚಿತ್ರವನ್ನು ನೋಡಿ ಭಯ ಪಡಬಾರದೆಂದು ನನ್ನ ವಿನಂತಿ.