ಚಿತ್ರ: ನವಗ್ರಹ
ತಾರಾಗಣ: ದರ್ಶನ್,ತರುಣ್,ಸೃಜನ್,ವಿನೋದ್ ಪ್ರಭಾಕರ್,ನಾಗೇಂದ್ರ,ವರ್ಷಾ,ಶರ್ಮಿಳಾ
ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ನಿರ್ದೇಶನ: ದಿನಕರ್ ತೂಗುದೀಪ್
ಆಡಿಯೋ ಸಂಸ್ಥೆ: ಆನಂದ್ ಆಡಿಯೋ
| ಕಣ್ ಕಣ್ ಸಲಿಗೆ ಸಲೆಗೆ ಅಲ್ಲ ಸುಲಿಗೆ | ಸೋನು ನಿಗಂ | ಅತ್ಯಂತ ಇಂಪಾದ ಹಾಡು. One of the best songs in the recent times! ಹಿನ್ನೆಲೆ ಸಂಗೀತ ಸೂಪರ್! ಸೋನು ಗಾಯನ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಸಾಹಿತ್ಯ ಕೂಡ ಉತ್ತಮವಾಗಿದೆ.ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳಿವೆ! | 9/10 |
| ಯಾಮಿ ಯಾಮಿ | ಕುನಾಲ್ ಗಾಂಜಾವಾಲ | Fast Number. ಸಂಗೀತ ಉತ್ತಮ. ಕುನಾಲ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಡ್ಯಾನ್ಸ್ ಮಾಡಲು ಒಳ್ಳೆಯ ಹಾಡು. | 8/10 |
| ಅಂಬಾರಿ ಊರಿನಲ್ಲಿ | ಸೌಮ್ಯಾ ಮಹದೇವನ್ | ಮತ್ತೊಂದು fast number. ಐಟಂ ಸಾಂಗ್ ಇರಬಹುದು. | 7/10 |
| ನರಮನಸ ನರಮನಸ | ಹರಿಹರನ್ | ಜೀವನದ ಏಳು ಬೀಳುಗಳನ್ನು ಬಣ್ಣಿಸುವ ಒಳ್ಳೆಯ ಸಾಹಿತ್ಯ. ಹರಿಹರನ್ ಗಾಯನ ಕೂಡ ಅಷ್ಟೇ ಚೆನ್ನಾಗಿದೆ. ಒಳ್ಳೆಯ ಹಾಡು! | 8/10 |
| ಸ್ಟೈಲೋ ರೇ ಸ್ಟೈಲೋ | ಜಸ್ಸಿ ಗಿಫ್ಟ್, ಚೈತ್ರಾ,ಟಿಪ್ಪು, ಕಾರ್ತೀಕ್ | ಹರಿಕೃಷ್ಣ ಆಲ್ಬಂ ಅಂದಮೇಲೆ ನಮ್ಮ ಚೈತ್ರಾ ಹಾಡು ಇಲ್ದೇ ಇದ್ರೆ ಹೇಗೆ ಹೇಳಿ. ಕಂಗ್ಲೀಷ್ ಹಾಡು. ಚಿತ್ರದಲ್ಲಿ ಎಲ್ಲಾ ನವಗ್ರಹರೂ ಒಟ್ಟಿಗೆ ಹೇಳುವ ಹಾಡು! | 7/10 |
ಒಟ್ಟಿನಲ್ಲಿ ಇದೊಂದು ಉತ್ತಮ ಆಲ್ಬಂ. ಕಣ್ ಕಣ್ ಸಲಿಗೆ ಹಾಡು ಮೋಡಿ ಮಾಡುತ್ತದೆ. ಯಾಮಿ ಯಾಮಿ ಕುಣಿಯುವಂತೆ ಮಾಡುತ್ತದೆ. ಉಳಿದ ಹಾಡುಗಳೂ ಚೆನ್ನಾಗಿಯೇ ಇವೆ. ಕಳಪೆ ಎನ್ನುವಂತೆ ಯಾವ ಹಾಡೂ ಇಲ್ಲ! ಆ ಮಟ್ಟಿಗೆ ಹರಿಕೃಷ್ಣ ಗೆದ್ದಿದ್ದಾರೆ!
ತೂಗುದೀಪ ಸಂಸ್ಥೆಯ ಎರಡನೇ ಚಿತ್ರ ನವಗ್ರಹ ಅವರ ಮೊದಲ ಚಿತ್ರ ಜೊತೆ ಜೊತೆಯಲಿಯನ್ನೂ ಮೀರಿಸುವಂತೆ ಯಶಸ್ವಿಯಾಗಲಿ, ಮತ್ತೊಂದು ಮ್ಯೂಸಿಕಲ್ ಹಿಟ್ ಆಗಲಿ ಎಂದು ಹಾರೈಸೋಣ!