ಚಿತ್ರಮಂದಿರ ಸಮಸ್ಯೆ.. ಐದರಲ್ಲಿ ಎರಡು ಮಾತ್ರ ಬಿಡುಗಡೆ.

Published on November 26, 2008 by admin   ·   No Comments

ನವೆಂಬರ್ 28ರಿಂದ – ಡಿಸೆಂಬರ್ 4 ರವರೆಗೆ

ಬಹುಷಃ ಈ ವಾರ ಒಂದು ಅಂದಾಜಿನ ಪ್ರಕಾರ ಐದು ಕನ್ನಡ ಚಿತ್ರಗಳು ತೆರೆಕಾಣಬೇಕಿತ್ತು! ಸಧ್ಯ ಗಾಂಧೀನಗರಿಗರ ಪುಣ್ಯ.. ಮೂರು ಚಿತ್ರಗಳು ಮುಂದೆ ಹೋಗಿವೆ.  ಕಳೆದ ವಾರವೇ ಆಗಮನದ ನಿರೀಕ್ಷೆ ಹುಟ್ಟಿಸಿದ್ದ ಜನುಮದ ಗೆಳತಿ ಯಾಕೋಈ ವಾರವೂ ಮನಸು ಮಾಡಿಲ್ಲ. ಮಸ್ತ್ ಮಜಾ ಮಾಡುವ ಅವಕಾಶ ಈ ವಾರವೂ ಕೈಗೂಡುತ್ತಿಲ್ಲ.  ಪಲ್ಲವಿ ಇಲ್ಲದ ಚರಣ ಇಲ್ಲಿ ಹೋಯ್ತೋ ದೇವರೇ ಬಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಚಿತ್ರ ಮಂದಿರದ ಸಮಸ್ಯೆ. ಕೆಂಪೇಗೌಡ ರಸ್ತೆಯಲ್ಲಿ ಕನ್ನಡಕ್ಕೆ ಅಂತ ಈಗ ಉಳಿದಿರುವ ಚಿತ್ರಮಂದಿರಗಳು ನಾಲ್ಕೈದು ಮಾತ್ರ. ಅದರಲ್ಲಿ ಬುದ್ಧಿವಂತ, ವಂಶಿ ಎರಡು ಚಿತ್ರಮಂದಿರಗಳಲ್ಲಿ ಭದ್ರವಾಗಿ ಕೂತುಬಿಟ್ಟಿವೆ. ನವಗ್ರಹ, ಸ್ಲಂ ಬಾಲ ಎರಡು ವಾರಗಳ ಹಿಂದಷ್ಟೇ ತೆರೆಕಂಡಿದ್ದು ಈಗಲೇ ಜಾಗ ಖಾಲಿ ಮಾಡುವ ಸ್ಥಿತಿಯಲ್ಲಿಲ್ಲ. ಉಳಿದ ಎರಡರಲ್ಲಿ ಎಷ್ಟು ಅಂತ ಚಿತ್ರಗಳನ್ನು ಪ್ರದರ್ಶಿಸಲು ಸಾಧ್ಯ? ಹಾಗಾಗಿ ಮುಂದಕ್ಕೆ ಹೋಗುವುದೊಂದೇ ಉಳಿದಿರುವ ದಾರಿ…ಆದರೆ ಮುಂಬರುವ ವಾರಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚುವ ಭೀತಿ ಇದೆ.., ಯಾಕೆಂದರೆ ಬಿಡುಗಡೆಗೆ ಕಾದಿರುವ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ.. ನಂ ಜಯಮಾನ್ರು, ಪರಮೇಸ ಪಾನವಾಲ, ಹಾಗೇ ಸುಮ್ಮನೆ, ಅಕ್ಕ ತಂಗಿ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಜಾಲಿ ಡೇಯ್ಸ್, ನಂ ಏರಿಯಾಲಿ ಒಂದಿನ….. ಉಸ್ಸಪ್ಪ… ಇವಕ್ಕೆಲ್ಲ ಯಾವಾಗ ’ಮುಕ್ತಿ’ ಸಿಗುವುದೋ ಗೊತ್ತಿಲ್ಲ..

ಹಾಗಾಗಿ ಈ ವಾರ ಎರಡು ಚಿತ್ರಗಳು ಮಾತ್ರ ತೆರೆಕಾಣುತ್ತಿವೆ..

೧. ಅಕ್ಷಯ್ – ಮಲ್ಲಿಕಾ ಕಪೂರ್ ಅಭಿನಯದ ರೊಮ್ಯಾಂಟಿಕ್ ಚಿತ್ರ ಗಂಗಾ ಕಾವೇರಿ. (ಅಪರ್ಣಾ)

೨. ಆದಿ ಲೋಕೇಶ್ ಅಭಿನಯದ ಕಡಿ-ಬಡಿ ಚಿತ್ರ ಬಿಡ್ಡ. (ತ್ರಿಭುವನ್) 

 

 

::ಹೊರ ನಡೆಯುತ್ತಿರುವ ಕನ್ನಡ ಚಿತ್ರಗಳು::

ಮಹರ್ಷಿ (ಅಪರ್ಣಾದಿಂದ. ಒಟ್ಟು ಪ್ರದರ್ಶನ – 2 ವಾರಗಳು)

nn

  4 ನೇ ವಾರಕ್ಕೆ -  ಸಾಗರ್
  4 ನೇ ವಾರಕ್ಕೆ -  ಕಪಾಲಿ
 

5 ನೇ ವಾರಕ್ಕೆ -  ಮೇನಕಾ

6 ನೇ ವಾರಕ್ಕೆ – ತ್ರಿವೇಣಿ
  9 ನೇ ವಾರಕ್ಕೆ – ಸಂತೋಷ್
 

2
10 ನೇ ವಾರಕ್ಕೆ – ನರ್ತಕಿ

ಸಧ್ಯಕ್ಕೆ "ಬುದ್ಧಿವಂತ"  ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (10 ನೇ ವಾರದಲ್ಲಿ!)

 

ff

ggg

  • ಮಸ್ತ್ ಮಜಾ ಮಾಡಿ
  • ಜನುಮದ ಗೆಳತಿ
  • ಪರಮೇಶ ಪಾನವಾಲ
  • ಹಾಗೇ ಸುಮ್ಮನೆ
  • ಅಕ್ಕ ತಂಗಿ

akumar.reach@gmail.com

Readers Comments (0)




Please note: Comment moderation is enabled and may delay your comment. There is no need to resubmit your comment.

Author Info