ಈ ವಾರ ಗಣೇಶ್-ರಮ್ಯಾ ಅಭಿನಯದ ಬೊಂಬಾಟ್ ತೆರೆಗೆ!

Published on August 6, 2008 by admin   ·   No Comments
ಆಗಸ್ಟ್ 8 ರಿಂದ 14 ರ ವರೆಗೆ

ಬೊಂಬಾಟ್ ಬೆಳ್ಳಿ ತೆರೆಗೆ!    ಪ್ರಮುಖ ಚಿತ್ರಮಂದಿರ: ಕಪಾಲಿ

bombat

ಈ ವಾರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಮೊದಲ ಬಾರಿಗೆ ರಮ್ಯಾ ನಟಿಸಿರುವ ಬಹು ನಿರೀಕ್ಷಿತ "ಬೊಂಬಾಟ್" ಚಿತ್ರ ರಾಜ್ಯಾದ್ಯಂತ 75ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ತೆರೆಕಾಣುತ್ತಿದೆ. ಬೆಂಗಳೂರು ನಗರದಲ್ಲೇ ಮೂವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದು ವಿಶೇಷ.

bom

ರಾಜ್ಯದ ಅತೀ ದೊಡ್ಡ ಚಿತ್ರಮಂದಿರ ಕಪಾಲಿಯಲ್ಲಿ ಚಿತ್ರ ತೆರೆಕಾಣುತ್ತಿದೆ! ಮುಂಗಾರು ಮಳೆ ಮತ್ತು ಚೆಲುವಿನ ಚಿತ್ತಾರದ ನಂತರ ಮತ್ತೊಮ್ಮೆ ಗಣೇಶ್ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಮುಂಗಾರು ಮಳೆ, ಚೆಲುವಿನ ಚಿತ್ತಾರ ಎರಡೂ ಸೂಪರ್ ಹಿಟ್ ಆಗಿದ್ದವು. ಈಗ ಬೊಂಬಾಟ್ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭು ಹೇಗೆ ಸ್ವೀಕರಿಸಲಿದ್ದಾನೆ ಎಂಬುದು ಸಧ್ಯಕ್ಕೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಚಿತ್ರದ ನಿರ್ಮಾಪಕರು ರಾಕ್ ಲೈನ್ ವೆಂಕಟೇಶ್. ಬಿಂದಾಸ್ ನಂತರ 2008 ರಲ್ಲಿ ಡಿ.ರಾಜೇಂದ್ರ ಬಾಬು ನಿರ್ದೇಶನದ ಎರಡನೇ ಚಿತ್ರ ತೆರೆಕಾಣುತ್ತಿದೆ. ಚಿತ್ರದ ಹಾಡುಗಳು ಈಗಾಗಲೇ  ಹಿಟ್ ಆಗಿರುವುದು ಚಿತ್ರಕ್ಕೆ ಉತ್ತಮ ಆರಂಭವನ್ನು ತಂದುಕೊಡುವ ನಿರೀಕ್ಷೆಯಿದೆ.

 

Image

 

ವಾರದ ಮತ್ತೊಂದು ಬಿಡುಗಡೆ – ಕಲ್ಲೇಶಿ ಮಲ್ಲೇಶಿ.    ಪ್ರಮುಖ ಚಿತ್ರಮಂದಿರ: ಸಪ್ನ

mm

ಪಾಪಾ ಪಾಂಡು ಟಿವಿ ಧಾರಾವಾಹಿಯಿಂದ ಜನಪ್ರಿಯವಾಗಿರುವ ಚಿದಾನಂದ್ ತ್ರಿಪಾತ್ರದಲ್ಲಿ ನಟಿಸಿರುವ ಕಲ್ಲೇಶಿ ಮಲ್ಲೇಶಿ ಈ ವಾರ ಸಪ್ನಾದಲ್ಲಿ ತೆರೆಕಾಣುತ್ತಿದೆ. ಮಸ್ತಾನ್ ಈ ಚಿತ್ರದ ನಿರ್ದೇಶಕರು. ಧರ್ಮ, ಬುಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ, ಲಕ್ಷ್ಮೀ ದೇವಿ ಚಿತ್ರದ ಇತರ ತಾರಾಗಣದಲ್ಲಿದ್ದಾರೆ.

ಗಂಧದಗುಡಿ ಬೊಂಬಾಟ್ ಮತ್ತು ಕಲ್ಲೇಶಿ ಮಲ್ಲೇಶಿ ಚಿತ್ರಗಳಿಗೆ ಶುಭ ಹಾರೈಸುತ್ತದೆ.
 

 

  • ನರ್ತಕಿಯಲ್ಲಿ "ಗಜ" ಮರು ಬಿಡುಗಡೆ. ಒಂದೇ ವಾರಕ್ಕೆ ನಂದಾ ದೀಪಕ್ಕೆ ಗೇಟ್ ಪಾಸ್. ಬರುವ ವಾರ ಇಲ್ಲಿ ದರ್ಶನ್ ಅಭಿನಯದ ಅರ್ಜುನ್ ಬರುವ ಸಾಧ್ಯತೆ!

ಮುಂದುವರಿದ ಪ್ರದರ್ಶನ:

mm ಮೊಗ್ಗಿನ ಮನಸು ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ! ಯಶಸ್ಸಿನ ನಾಗಾಲೋಟದೊಂದಿಗೆ ನಾಲ್ಕನೇ ವಾರಕ್ಕೆ ಪ್ರವೇಶ!

mm

ಯಶಸ್ವೀ 3 ನೇ ವಾರಕ್ಕೆ.

 

  • ಮುಸ್ಸಂಜೆ ಮಾತು (ತ್ರಿವೇಣಿ) – 13 ನೇ ವಾರ
  • ಮೆರವಣಿಗೆ (ಅಪರ್ಣಾ) – 7 ನೇ ವಾರ
  • ಮೊಗ್ಗಿನ ಮನಸು (ಸಾಗರ್) 4 ನೇ ವಾರ
  • ತಾಜ್ ಮಹಲ್ (ಸಂತೋಷ್) 3 ನೇ ವಾರ

ಹೊಸ ಆಡಿಯೋಗಳು:

  • vamshi ಪುನೀತ್ ರಾಜ್ ಕುಮಾರ್ – ಪ್ರಕಾಶ್ ಮಿಲನದ ವರ್ಷದ ಮತ್ತೊಂದು ಬಹು ನಿರೀಕ್ಷಿತ ಚಿತ್ರ! ವಂಶಿ ಚಿತ್ರದ ಆಡಿಯೋ ವಿಮರ್ಶೆ.. ನಿರೀಕ್ಷಿಸಿ… ಅತೀ ಶೀಘ್ರದಲ್ಲಿ.! 
  • ನನ್ನುಸಿರೇ - ಉದಯ ಟಿವಿ ನಿರೂಪಕ ರಾಹುಲ್ ನಟನೆಯ ಮೊದಲ ಚಿತ್ರ!

ಅತೀ ಶೀಘ್ರದಲ್ಲೇ..

  • ಅರ್ಜುನ್ - ಅಗಸ್ಟ್ 15 ರಿಂದ
  • ಮಾದೇಶ
  • ಚೈತ್ರದ ಚಂದ್ರಮ
  • ಧಿಮಾಕು
  • ಸೈಕೋ
  • ಮೇಘವೇ ಮೇಘವೇ
Readers Comments (0)




Please note: Comment moderation is enabled and may delay your comment. There is no need to resubmit your comment.

Author Info