ಈ ವಾರ ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ಕನ್ನಡ ಚಿತ್ರಗಳು!
Published on October 8, 2008 by admin · No Comments
ಅಕ್ಟೋಬರ್ 10 ರಿಂದ ಅಕ್ಟೋಬರ್ 17 ರ ವರೆಗೆ

ಈ ವಾರ ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ಕನ್ನಡ ಚಿತ್ರಗಳು ಗಾಂಧೀನಗರಕ್ಕೆ ಕಾಲಿಡುತ್ತಿವೆ! ಆದರೆ ವಿಪರ್ಯಾಸವೆಂದರೆ ಒಂದು ಚಿತ್ರವೂ ಭರವಸೆಯನ್ನು ಮೂಡಿಸುವಂತಿಲ್ಲ. ಸಮರಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ದೊಡ್ಡ ದೊಡ್ಡ ಚಿತ್ರಗಳ ಪೈಪೋಟಿಯ ನಡುವೆ ಈ ನಾಲ್ಕು ಸಣ್ಣ ಚಿತ್ರಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
೧. ಮಂದಾಕಿನಿ (ಚೇತನ್, ದುನಿಯಾ ಖ್ಯಾತಿಯ ರಶ್ಮಿ.) – ತ್ರಿಭುವನ್
೨. ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ (ಉದಯ ಟಿವಿ ನಿರೂಪಕ ಶ್ರವಂತ್, ಪೂಜಾ ಗಾಂಧಿ ತಂಗಿ ರಾಧಿಕಾ ಗಾಂಧಿ. ) – ಅಪರ್ಣ
೩. ಬಾ ಬೇಗ ಚಂದಮಾಮ (ಪ್ರಿನ್ಸ್ ದೀಪಕ್)- ತ್ರಿವೇಣಿ
೪. ಮನ್ಮಥರು (ಪಾಪ ಪಾಂಡು ಚಿದಾನಂದ್, ಶೋಭರಾಜ್ )- ಸಪ್ನಾ
::ಹೊರನಡೆಯುತ್ತಿರುವ ಕನ್ನಡ ಚಿತ್ರಗಳು::
೧. ಮಾದೇಶ (ತ್ರಿವೇಣಿಯಿಂದ. ಒಟ್ಟು ಪ್ರದರ್ಶನ: 6 ವಾರಗಳು)
೨. ಧಿಮಾಕು (ಸಪ್ನಾದಿಂದ. ಒಟ್ಟು ಪ್ರದರ್ಶನ: 1 ವಾರ. ಇದು ಕಳೆದವಾರವಷ್ಟೇ ತ್ರಿಭುವನ್‍ನಿಂದ ಸಪ್ನಾಕ್ಕೆ ಸ್ಥಳಾಂತರಗೊಂಡಿತ್ತು)
೩. ಗಣೇಶ ಮತ್ತೆ ಬಂದ (ಅಪರ್ಣಾದಿಂದ. ಒಟ್ಟು ಪ್ರದರ್ಶನ: 5 ವಾರಗಳು)
ದೇವರೇ, ಈ ನಾಲ್ಕೂ ಚಿತ್ರಗಳನ್ನೂ ಕಾಪಾಡಪ್ಪಾ… ಗಂಧದಗುಡಿ ಕಡೆಯಿಂದ ಶುಭ ಹಾರೈಕೆಗಳು!

ಸಧ್ಯಕ್ಕೆ ಮೊಗ್ಗಿನ ಮನಸು ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (13 ನೇ ವಾರದಲ್ಲಿ)

- ಪಯಣ – ಅಕ್ಟೋಬರ್ 17 ರಿಂದ : ಅಭಿನಯ್
- ಸಂಗಾತಿ – ಅಕ್ಟೋಬರ್ 17 ರಿಂದ : ಕಪಾಲಿ
- ಸೈಕೋ – ಅಕ್ಟೋಬರ್ 31ರಿಂದ
- ಸಂಗಮ – ಅಕ್ಟೋಬರ್ 24 ರಿಂದ ?
- ಗಂಗಾ ಕಾವೇರಿ
akumar.reach@gmail.com